
27th August 2025
ನೇಸರಗಿ- ಬಸವಣ್ಣವರು ಸರ್ವಜನಾಂಗಕ್ಕೂ ಬೇಕಾದ ನಾಯಕರಾಗಿದ್ದು , ಅವರ ಹೆಸರಿನ ಮೂರ್ತಿಗಳು, ನಾಮಫಲಕಗಳನ್ನು ಸ್ಥಾಪಿಸುವ ಮೂಲಕ ಅವರನ್ನು ಸದಾ ಸ್ಮರಿಸಬಹುದೆಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಸ್ಥಳೀಯ ನೇಸರಗಿ ಕ್ರಾಸ ಹತ್ತಿರ ಶ್ರೀ ಬಸವೇಶ್ವರ ನಾಮಫಲಕ ಉದ್ಘಾಟನೆ ಮತ್ತು ಶ್ರೀ ಬಸವೇಶ್ವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿ,
ಬಸವೇಶ್ವರರು ನಾಡಿನ, ಜಗತ್ತಿಗೆ ತಮ್ಮ ವಚನಗಳ ಮೂಲಕ ಸರ್ವಜನಾಂಗದ ಶಾಂತಿಯ ಮಂತ್ರ ಘೋಷಿಸಿದ್ದಾರೆ.ಅವರ ಆದರ್ಶ ಗಳನ್ನು ಯುವಕರು ಪಾಲಿಸಬೇಕೆಂದರು.
ಕಾರ್ಯಕ್ರಮದಲ್ಲಿ ಬೆಳಗಾವಿ ನಾಗನೂರ ರುದ್ರಾಕ್ಷಿ ಮಠದ ಡಾ. ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು, ನೇಸರಗಿ ಮಲ್ಲಾಪೂರ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು, ಶರಣಪ್ರಭು ಮಹಾಸ್ವಾಮಿಗಳು, ಜಾಗತಿಕ ಲಿಂಗಾಯತ ಸಂಘಟನೆ ಜಿಲ್ಲಾ ಅಧ್ಯಕ್ಷರಾದ ಬಸವರಾಜ ರೊಟ್ಟಿ, ಬೆಳಗಾವಿ ಲಿಂಗಾಯತ ಸಂಘಟನೆ ಮುಖಂಡ ಅಶೋಕ ಮಳಗಲಿ, ರಮೇಶ ಉಳವಿ, ವಿ ಕೆ. ಪಾಟೀಲ, ಜಿ.ಪಂ ಮಾಜಿ ಸದಸ್ಯ ನಿಂಗಪ್ಪ ಅರಿಕೇರಿ, ಕಲಾವಿದ ಫಕ್ಕಿರಪ್ಪ ಸೋಮಣ್ಣವರ, ಕೆಂಚಪ್ಪ ಕಳ್ಳಿಬಡ್ಡಿ, ಈಶ್ವರ ಬಾಗೋಜಿ, ಗ್ರಾ.ಪಂ ಸದಸ್ಯ ನಿಂಗಪ್ಪ ತಳವಾರ, ಮಲ್ಲಿಕಾರ್ಜುನ ಹಸಬಿ, ಶಿಕ್ಷಕ ರಾಜಶೇಖರ ಗೆಜ್ಜಿ, ಬಾಳಪ್ಪ ಮಾಳಗಿ,
ಶಿವನಪ್ಪ ಮದೆನ್ನವರ,ಯಮನಪ್ಪ ಪೂಜೇರಿ, ಸುರೇಶ ಅಗಸಿಮನಿ,ಸುಜಾತ ಪಾಟೀಲ,
ಮಕಬುಲ್ ಬೇಪಾರಿ, ನಾಗನಗೌಡ ಪಾಟೀಲ,ರಾಯನಗೌಡ ಪಾಟೀಲ, ಸಂಗಪ್ಪ ಗಡದವರ, ಹಲವರು ಪಾಲ್ಗೊಂಡಿದ್ದರು.
undefined
ಬೆಳಗಾವಿ ದರ್ಪಣ ರೋಟರಿ ಕ್ಲಬ್ – “ಜೀವನ ಆರಿಸಿ, ವ್ಯಸನ ಬಿಡಿ” ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ